ಕುಕ್ಕೆ ಸುಬ್ರಮಣ್ಯ ದೇವಸ್ತಾನದ ಗರ್ಭ ಗುಡಿಯ ಎದುರು ದ್ವಾರದಲ್ಲಿ ಒಂದು ದೊಡ್ಡ ಘಂಟೆ ನೇತು ಹಾಕಿದ್ದಾರೆ .ಆ ಘಂಟೆಯನ್ನ ಅಲ್ಲಿ ಹಾಕಿರುವ ಉದ್ದೇಶ ದೇವಾಸ್ತನದಲ್ಲಿ ಮಹಾಮಂಗಳಾರತಿ ನೆಡೆಯುವಾಗ ಗಜರಾಜ ಬಂದು ತನ್ನ ಸೊಂಡಿಲಿನಿಂದ ಘಂಟೆ ಭಾರಿಸಿ,ವಂದಿಸಲು ಹಾಗು ಈ ಘಂಟೆಯನ್ನ ಭಕ್ತಾದಿಗಳು
ಭಾರಿಸಲು ಅವಕಾಶವಿಲ್ಲ ...ಹೀಗೆ ಸಾಲಾಗಿ ನಿಂತಿರುವಾಗ ದೇವರ ದರ್ಶನ ಮಾಡಿ ಬಂದಂತಹ ಒಬ್ಬ ಭಕ್ತಾದಿ ಘಂಟೆ ಭಾರಿಸಲು ಪ್ರಯತ್ನಿಸಿ,ಅದು ಸಾಧ್ಯವಾಗದ ಕರಣ ಅದಕ್ಕೆ ನಮಿಸಿ ಮುಂದೆ ನಡೆದರು . ಇದನ್ನು ಗಮನಿಸಿದ ಹತ್ತು ಹಲವಾರು ಭಕ್ತಾಧಿಗಳು ಕಾರಣ ತಿಳಿಯದೆ ಆ ದೊಡ್ಡ ಘಂಟೆಗೆ ನಮಸ್ಕರಿಸಲು ಆರಂಭಿಸಿದರು......ಇದ್ದಕ್ಕೆ ಅಲ್ಲವೇ ಹೇಳೋದು ಕುರಿಗಳು ಸಾರ್ ಕುರಿಗಳು ಅಂತ .....ನಾವು ಮಾಡುವ ಪ್ರತಿಯೊಂದು ಕರ್ಮಗಳಿಗು ಕಾರಣ ಹಾಗು ಆತ್ಮ ತೃಪ್ತಿ ಇರಲಿ .....
ನಿಮ್ಮ
ಶೀಲ
nice observation
ReplyDelete