Monday, September 21, 2009

ನನ್ನ ಅನುಭವ

ಕುಕ್ಕೆ ಸುಬ್ರಮಣ್ಯ ದೇವಸ್ತಾನದ ಗರ್ಭ ಗುಡಿಯ ಎದುರು ದ್ವಾರದಲ್ಲಿ ಒಂದು ದೊಡ್ಡ ಘಂಟೆ  ನೇತು ಹಾಕಿದ್ದಾರೆ .ಆ ಘಂಟೆಯನ್ನ  ಅಲ್ಲಿ ಹಾಕಿರುವ ಉದ್ದೇಶ ದೇವಾಸ್ತನದಲ್ಲಿ ಮಹಾಮಂಗಳಾರತಿ ನೆಡೆಯುವಾಗ ಗಜರಾಜ ಬಂದು ತನ್ನ ಸೊಂಡಿಲಿನಿಂದ ಘಂಟೆ ಭಾರಿಸಿ,ವಂದಿಸಲು ಹಾಗು ಈ ಘಂಟೆಯನ್ನ ಭಕ್ತಾದಿಗಳು
ಭಾರಿಸಲು ಅವಕಾಶವಿಲ್ಲ ...ಹೀಗೆ ಸಾಲಾಗಿ ನಿಂತಿರುವಾಗ ದೇವರ ದರ್ಶನ ಮಾಡಿ  ಬಂದಂತಹ ಒಬ್ಬ ಭಕ್ತಾದಿ ಘಂಟೆ ಭಾರಿಸಲು ಪ್ರಯತ್ನಿಸಿ,ಅದು ಸಾಧ್ಯವಾಗದ ಕರಣ ಅದಕ್ಕೆ ನಮಿಸಿ ಮುಂದೆ ನಡೆದರು . ಇದನ್ನು ಗಮನಿಸಿದ ಹತ್ತು ಹಲವಾರು ಭಕ್ತಾಧಿಗಳು ಕಾರಣ ತಿಳಿಯದೆ ಆ ದೊಡ್ಡ ಘಂಟೆಗೆ ನಮಸ್ಕರಿಸಲು ಆರಂಭಿಸಿದರು......ಇದ್ದಕ್ಕೆ ಅಲ್ಲವೇ ಹೇಳೋದು ಕುರಿಗಳು ಸಾರ್ ಕುರಿಗಳು ಅಂತ .....ನಾವು ಮಾಡುವ ಪ್ರತಿಯೊಂದು ಕರ್ಮಗಳಿಗು ಕಾರಣ ಹಾಗು ಆತ್ಮ ತೃಪ್ತಿ ಇರಲಿ .....

ನಿಮ್ಮ
ಶೀಲ

1 comment: